ಉಶೀನರ
1 ಯಾದವ ವಂಶದ ಒಬ್ಬ ದೊರೆಯ ಹೆಸರು. 2 ಚಂದ್ರವಂಶದ ಅನು ಕುಲದಲ್ಲಿ ಜನಿಸಿದ ಒಬ್ಬ ರಾಜ. ಭೋಜ ದೇಶವನ್ನು ಆಳುತ್ತಿದ್ದ. ಯಯಾತಿಯ ಮಗಳಾದ ಮಾಧವಿ ಇವನ ಪತ್ನಿ, ತ್ಯಾಗಶೀಲನೆಂದು ಪ್ರಸಿದ್ಧನಾಗಿರುವ ಶಿಬಿ ಚಕ್ರವರ್ತಿ ಇವನ ಮಗ. 3 ಭಾಗವತದ ಪ್ರಕಾರ ಅನುರಾಜನ ಕುಲದಲ್ಲಿ ಜನಿಸಿದ ಸೃಂಜಯನ ಮಗನಾದ ಮಹಾಮನಸನ ಮಗ. 4 ಒಂದು ದೇಶದ ಹೆಸರು.												
(ಬಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ